Guruve varahaja thatavasa Bhajan lyrics in Kannada

ಗುರುವೇ ವರಹಜ ತಟವಾಸ
ಪುರಿ ಮಂತ್ರಾಧೀಶ || ಪ ||

ಅರು ಮೊರೆಯಿಡುವೆನು ವರಪದ ಪದುಮಕೆ
ಕರುಣದಲ್ಲೆನ್ನ ಮನ ಹರಿಯಲಿ ಇರಿಸೋ || ಅ. ಪ ||

ಬಾಗಿ ಭಜಿಪೆ ಗುರುವೇ ಎನ್ನಯ ರೋಗ ಹರಿಸು ಪ್ರಭುವೇ |
ರಾಘವೇಂದ್ರ ದುರಿತೌಘವಿದೂರನೆ
ಭೋಗಿಶಯನ ಪದ ರಾಗದಿ ಭಜಿಸುವ || 1 ||

ಭೂತ ಪ್ರೇತ ಬಾಧೆ ಬಿಡಿಸುವ ಖ್ಯಾತಿ ನಿಮ್ಮದು ತಿಳಿದೆ |
ದೂತರೆನಿಪ ಜನ ಆತು ನಿಮ್ಮ ಪದ
ಪ್ರೀತಿ ಸೇವೆಯಲಿ ಕಾತುರದಿಹರೋ || 2 ||

ಮೌನಿವರ್ಯ ನಿನ್ನ ಬೇಡುವೆ ಜ್ಞಾನ ಭಕುತಿಯನ್ನ |
ದಾನ ಮಾಡಿ ಅಜ್ಞಾನವನೋಡಿಸೆ
ಹೀನ ಯೋನಿ ಬರಲೇನು ಅಂಜೆನೋ || 3 ||

ಪರಿಮಳಾರ್ಯರೆಂದು ನಿಮ್ಮಯ ಬಿರುದು ಕೇಳಿಬಂದು |
ಮೊರೆಯನಿಡುವೆ ತವ ಚರಣಾಂಬುರುಹಕೆ
ಅರವನೀಯೋ ತವ ಪರಿಮಳ ಸೊಬಗನು || 4 ||

ಗುರು ಸುಧೀಂದ್ರ ಕರಜ ತೋರ್ಪುದು ಹರಿಯ ಪಾದ ಬಿಸಜ |
ವರಸುಹೃದ್ಗ ಗುರುಗೋವಿಂದವಿಠಲನ
ಚರಣ ಸರೋಜವ ನಿರುತ ಭಜಿಪ ಗುರು || 5 ||