Nee mayeyolago Bhajan Lyrics in Kannada

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ |
ನೀ ದೇಹದೊಳಗೊ ನಿನ್ನೊಳು ದೇಹವೋ || ಪ ||

ಬಯಲು ಆಲಯದೊಳಗೊ ಆಲಯವು ಬಯಲೊಳಗೊ |
ಬಯಲು ಆಲಯವೆರಡು ನಯನದೊಳಗೋ || ೧ ||

ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ |
ನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ || ೨ ||

ಕುಸುಮದಲಿ ಗಂಧವೊ ಗಂಧದಲಿ ಕುಸುಮವೋ |
ಕುಸುಮ ಗಂಧಗಳೆರಡು ಆಘ್ರಾಣದೊಳಗೋ || ೩ ||

ಅಸಮಭವ ಕಾಗಿನೆಲೆ ಆದಿಕೇಶವರಾಯ |
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೇ || ೪ ||