AMBIGA NAA NINNA NAMBIDHE Bhajan Lyrics in Kannada

Lyrics :

ಅಂಬಿಗ ನಾ ನಿನ್ನ ನಂಬಿದೆ
ಜಗದಂಬಾರಮಣ ನಿನ್ನ ನಂಬಿದೆ ||ಪ||

ತುಂಬಿದ ಹರಿಗೋಲಂಬಿಗ
ಅದಕ್ಕೊಂಭತ್ತು ಛಿದ್ರ ನೋಡಂಬಿಗ
ಸಂಭ್ರಮದಿಂ ನೋಡಂಬಿಗ
ಅದರಿಂಬು ನೋಡಿ ನಡೆಸಂಬಿಗ ||1||

ಹೊಳೆಯ ಭರವ ನೋಡಂಬಿಗ
ಅದಕೆ ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ ||2||

ಆರು ತೆರೆಯ ನೋಡಂಬಿಗ
ಅದು ಮೀರಿ ಬರುತ್ತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ
ಅದ ನಿವಾರಿಸಿ ದಾಟಿಸೋ ಅಂಬಿಗ ||3||

ಹೊತ್ತು ಹೋಯಿತು ನೋಡಂಬಿಗ
ಅಲ್ಲಿ ಮತ್ತೈವರೀರ್ವರು ಅಂಬಿಗ
ಒತ್ತಿನಡೆಸು ನೋಡಿ ಅಂಬಿಗ
ಎನ್ನ ಸತ್ಯಲೋಕಕ್ಕೆ ಒಯ್ಯೊ ಅಂಬಿಗ ||4||

ಸತ್ಯವೆಂಬುದೆ ಹುಟ್ಟಂಬಿಗ
ಸದಾ ಭಕ್ತಿಯಂಬುದೆ ಪಥವಂಬಿಗ
ಮುಕ್ತಿದಾಯಕ ನಮ್ಮ ಪುರಂದರವಿಠಲನ
ಮುಕ್ತಿ ಮಂಟಪಕೊಯ್ಯೋ ಅಂಬಿಗ ||5||