ALLIDE NAMMA MANE ILLI BANDHE SUMMANE Bhajan Lyrics in Kannada

Lyrics :

ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ||ಪ||

ಕದಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದಲೋಲ್ಯಾಡೊ ಸುಳ್ಳು ಮನೆ
ಇದಿರಾಗಿ ವೈಕುಂಠ ವಾಸಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ ||1||

ಮಾಳಿಗೆ ಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದು ಎಳೆದೊಯ್ವಾಗ
ಮಾಳಿಗೆ ಮನೆ ಸಂಗಡ ಬರುದೇನೆ ||2||

ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಲಿ ನಡೆಯದಿರೋ
ಒಡೆಯ ಶ್ರೀಪುರಂದರವಿಠ್ಠಲನ ಚರಣವ
ಧೃಡಭಕ್ತಿಯಲಿ ನೀ ಭಜಿಸೆಲೋ ಮನುಜ ||3||