AADA POGONA BARO RANGA Bhajan Lyrics in Kannada

Lyrics :

ಆಡ ಪೋಗೋಣ ಬಾರೋ ರಂಗ
ಕೂಡಿ ಯಮುನಾ(ಕಾಳಿಂದಿ) ತೀರದಲ್ಲಿ || ಪ ||

ನಾಡ ಜನರ ಹೆಂಗಳಿಗೆಲ್ಲ ಬೇಡಿದಿಷ್ಟಾರ್ಥಗಳ ಕೊಡುವ || ಅ.ಪ ||

ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||1||

ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿದೇವಿಗೆ ವಿವಾಹವಂತೆ
ಜಾಣ ನೀನು ಬರಬೇಕಂತೆ ||2||

ಕುಂಡಿನಿಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ
ನಿನಗೆ ಓಲೆ ಬರೆದಳಂತೆ ||3||

ಕೌರವರೊಳು ಪಾಂಡವರು
ಪಗಡೆಯಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠ್ಠಲ ಬರಬೇಕಂತೆ ||4||